Thursday, November 5, 2009

ಹೈದರಾಬಾದ್ ಗೆ ಹೋದ್ರೆ..!!ನೀವೇನಾದ್ರೂ ಹೈದರಾಬಾದ್ ಗೆ ಹೋಗೋವ್ರಿದ್ರೆ ಈ ಲೇಖನ ಉಪಯೋಗವಾಗಬಹುದು. ಅಲ್ಲಿ ಏನೇನು ನೊಡಬಹುದು ಅಂತ ಒಂದಷ್ಟು ವಿಚಾರಗಳು.

ಸುಮ್ನೆ ನೋಡ್ಕೊಂಡು ಬರ್ತೀನಂದ್ರೂ ಒಂದು ವಾರ ಮಿನಿಮಮ್ ಬೇಕು. ಬೇಸಿಗೆ ರಜೆಯಲ್ಲಿ ಮಾತ್ರ ಹೋಗ್ಬೇಡಿ....ರೋಸ್ಟ್ ಆಗ್ಬಿಡ್ತೀರ!!!
ಅಲ್ಲಿನ ಉರ್ದು ಮಿಶ್ರಿತ ಹಿಂದಿ ಮಾತಾಡೋ ಶೈಲಿ ಮಾತ್ರ ಸಕತ್!! ಕೇಳೋದಕ್ಕೆ ಮಜಾ!


ನಾನು ಮಾದಾಪುರ(ಹೈಟೆಕ್ ಸಿಟಿ) ರೆಫ಼ೆರೆನ್ಸಿಂದ ಶುರು ಮಾಡ್ತಿದ್ದೀನಿ. ಹೈಟೆಕ್ ಸಿಟಿ ಒಂತರಾ ನಮ್ಮ ಎಲೆಕ್ರ್ಟಾನಿಕ್ ಸಿಟಿ ತರ. ದ್ವಾರದಲ್ಲೇ "ಶಿಲ್ಪಾರಾಮಂ" ಪಾರ್ಕ್ ಇದೆ.
"ದುರ್ಗಂ ಚೆರುವು"ಗೆ (Secret Lake) ಹೈಟೆಕ್ ಸಿಟಿ ಒಳಗಿಂದ ಹೋಗಿ ಆಚೆ ದಡದಲ್ಲಿರೋ ಉದ್ಯಾನವನಕ್ಕೆ ತೆಪ್ಪದಲ್ಲಿ ಹೋಗೋದು ಚೆನ್ನಾಗಿರತ್ತೆ...ಉದ್ಯಾನವನದೊಳಗಿಂದ ಮೆಟ್ಟಿಲು ಹತ್ತಿ ಗುಡ್ಡದ ತುದಿಯಲ್ಲಿ ನಿಂತು ಸುತ್ತಲಿನ ವಿಶಾಲತೆಯನ್ನ ಅನುಭವಿಸೊದು..ವಾವ್!! ಶುಕ್ರವಾರವೋ ಭಾನುವಾರವೊ ನೆನಪಿಲ್ಲ ಸೌಂಡ್ & ಲೈಟ್ ಪ್ರೊಗ್ರಾಮ್ ಇರತ್ತೆ!!

"ಚಾರ್ಮಿನಾರ್"ನಲ್ಲಿ ನಿಮ್ಮನೆ ಮತ್ತು ಅಕ್ಕ ಪಕ್ಕದ್ಮನೆಯ ಹೆಣ್ಮಕ್ಕಳಿಗೆಲ್ಲಾ ಮುತ್ತು ಪೋಣಿಸಿದ ಬಳೆಗಳನ್ನ ತಗೊಳ್ಳಿ..ಹಾಗೆ ರೋಡ್ ಸೈಡ್ನಲ್ಲಿ ಫ಼ಸ್ಟ್ ಕ್ಲಾಸ್ ಇರಾನಿ ಟೀ ಟೇಸ್ಟ್ ಮಾಡಬಹುದು :) ಮಸೀದಿ ಕಾಂಪೌಂಡಿನಲ್ಲಿ ಹಾರಾಡೋ ಗುಂಪು ಗುಂಪು ಪಾರಿವಾಳಗಳಿಗೆ ಒಂದಷ್ಟು ಕಾಳು ಹಾಕಿ..

IMAX ನಮ್ಮ ಫೋರಂ ತರಾನೆ, PVR ನಲ್ಲಿ ಒಂದಷ್ಟು ತೆಲುಗು ಸಿನೆಮಾ ನೋಡಿ.. ಸಂಜೆ ಹೊತ್ತು ಟ್ಯಾಂಕ್ ಬಂಡ್ ರೋಡ್ನಲ್ಲಿ Walking ಮಾಡ್ತಾ Ice Cream ತಿನ್ನೋದು ಸಕತ್ತಾಗಿರತ್ತೆ!

ಅಲ್ಲೇ ಹತ್ತಿರದಲ್ಲಿರೋ ಸ್ನೋ ವರ್ಲ್ಡ್ಗೆ ಹೋಗಿ, ಇನ್ನೂರು ರೂಪಾಯಿಗೆ ಒಂದು ಗಂಟೆ ಹಿಮಾಲಯದ ಅನುಭವ ಸಿಗತ್ತೆ! ನಿಜವಾಗ್ಲೂ..

ಮತ್ತೆ ಬಿರ್ಲಾ ಮಂದಿರ್ಗೆ ಹೋಗಿ, ಹುಸೇನ್ ಸಾಗರ್, NTR ಪಾರ್ಕು ಹತ್ತಿರದಲ್ಲೆ ಇವೆ..ಹುಸೇನ್ ಸಾಗರ್ ನೀರು ಬಹಳ ಗಲೀಜು..:( ಬೋಟ್ನಲ್ಲಿ ಹೋಗೋದು ನಿಮಗೆ ಬಿಟ್ಟಿದ್ದು.. ಹೋದ್ರೆ ಮದ್ಯದಲ್ಲಿರೋ ಬುದ್ದನ ವಿಗ್ರಹವನ್ನ ನೋಡಬಹುದು.

ಹೈದರಾಬಾದ್ಗೆ ಹೋಗಿ ಹೈದರಾಬಾದ್ ಬಿರಿಯಾನಿ ತಿನ್ನಲಿಲ್ಲಾ ಅಂದ್ರೆ ಲೈಫ಼ೇ ವೇಷ್ಟು ಅಂತ ನನ್ನ ಸ್ಟ್ರಾಂಗ್ ಫೀಲಿಂಗು. ಹೈದರಾಬಾದ್ ಬಿರಿಯಾನಿಗೆ ಸಿಕಂದರ್ರಬಾದ್ನಲ್ಲಿರೋ ಪ್ಯಾರಡೈಸ್ಗೇ ಹೋಗಿ, ಆಮೇಲೆ ಅಲ್ಲೇ ಪಕ್ಕದ ರೋಡಲ್ಲಿ ಸಿಗೋ ಸ್ವೀಟ್ ಪಾನ್ ಸವಿಯೋದನ್ನ ಮಾತ್ರ ಮರೀಬೇಡಿ :)

ಗೋಲ್ಕೊಂಡ ಕೋಟೆಗೆ ಹೋಗಿ, ಸಂಜೆ ಸೌಂಡ್ & ಲೈಟ್ ಪ್ರೋಗ್ರಾಮ್ ಮುಗಿಯೋವರೆಗೂ ಇರಿ.. ಅಮಿತಾಬ್ ಬಚ್ಚನ್ ಗೋಲ್ಕೊಂಡ ಕೋಟೆಯ ಕತೆ ಹೇಳ್ತಾರೆ! ಆದ್ರೂ ನಮ್ಮ ಚಿತ್ರದುರ್ಗದ ಕೋಟೆಯಷ್ಟು ಭದ್ರವಿಲ್ಲ ಬಿಡಿ :)

ಆರ್ಚಿಯೋಲಾಜಿಕಲ್ ಮ್ಯೂಸಿಯಂನಲ್ಲಿರೋ ಬುದ್ದನ ಕಲ್ಲಿನ ವಿಗ್ರಹಗಳು ನನಗಂತೂ ಅಚ್ಚರಿ ಮೂಡಿಸಿದ್ವು..ಆಗಿನ ನವಾಬ ಕೊಂಡು ತಂದಿರೋ "ಮಮ್ಮಿ" ನೋಡೋದನ್ನ ಮರೀಬೇಡಿ!! (ಈಜಿಪ್ಟಿಗೆ ಹೋಗ್ತೀವೊ ಇಲ್ವೋ ಗೊತ್ತಿಲ್ಲ!!) ಸಾಲಾರ್ಜಂಗ್ ಮ್ಯೂಸಿಯಂನಲ್ಲಿ ನಿಜಾಮರ ಕಾಲದ ಅತ್ಯಮೂಲ್ಯ ದಿರಿಸುಗಳು,ಆಭರಣ,ಕತ್ತಿ,ಗುರಾಣಿ,ಚಿತ್ರಕಲೆ...ಅಳಿದುಳಿದ ಇತಿಹಾಸದ ವಸ್ತುಗಳಿವೆ.

ಸಿಕಂದರಾಬಾದ್ನಲ್ಲಿ ಒಳ್ಳೆಯ ಮುತ್ತು,ಹವಳಗಳು ಸಿಗುತ್ತವೆ...ನಿಮ್ಮ ಆಫೀಸ್ id card ತಗೊಂಡು ಹೋಗಿ, ಯಾಕಂದ್ರೆ ಕಾರ್ಪೊರೇಟ್ ಡಿಸ್ಕೌಂಟ್ ಅಂತ ೧೫-೨೦% ಕೊಡ್ತಾರೆ :) ಹಾಗೇ ಗೊತ್ತಿರೋರನ್ನ ಕರೆದುಕೊಂಡು ಹೋದ್ರೆ ಒರಿಜಿನಲ್ ಮುತ್ತು,ಹವಳಗಳು ಸಿಗುತ್ತವೆ...ಇಲ್ಲಾಂದ್ರೆ ನಿಮಗೊಂದು ಟೋಪಿ ಗ್ಯಾರಂಟಿ! :)

ಅಮೀರಪೆಟ್ನಿಂದ ಹೈಟೆಕ್ ಸಿಟಿಗೆ ಶೇರಿಂಗ್ ಆಟೋದಲ್ಲಿ ಹೋಗಿ..!!

ಕಾಚಿಗುಡದಲ್ಲಿ ಕನ್ನಡಿಗರು ತುಂಬಾ ಜನರಿದ್ದಾರೆ ಮತ್ತಲ್ಲಿ ರಾಯರ ಮಠ ಕೂಡ ಇದೆ.ಅಲ್ಲೇ ಒಂದು ಅಂಗಡಿಯಲ್ಲಿ ಚಾಕೋಲೇಟ್ ಫ್ಲೇವರ್ ಟೀ ಪುಡಿ ಸಿಗತ್ತೆ.ಬಹಳ ರೇರ್..ರುಚಿ ಮಾತ್ರ ಸೂಪರ್!

ಊರ ಹೊರಗೆ "ಚಿಲ್ಕೂರು ಬಾಲಾಜಿ" ದೇವಸ್ಥಾನವಿದೆ..ಇದನ್ನ VISA Temple ಅಂತಾನು ಕರೀತಾರೆ ಯಾಕಂದ್ರೆ ಅಲ್ಲಿ ಹೋಗಿ ೧೦೧ (೧೦೮ ಅನ್ನಿಸುತ್ತೆ!!) ಪ್ರದಷ್ಕಿಣೆ ಹಾಕಿದ್ರೆ ನಿಮ್ಗ್ಂತೂ VISA ಸಿಗೋದು ಗ್ಯಾರಂಟಿ !! :)

ರಾಮೋಜಿ ಫಿಲ್ಮ್ ಸಿಟಿಗೆ ವಿಕೆಂಡ್ನಲ್ಲೇ ಹೋಗಿ..ಪೂರ್ತಿ ನೋಡ್ಲಿಕ್ಕೆ ಒಂದು ದಿನವಂತು ಬೇಕೇ ಬೇಕು.

ಎಲ್ಲಿಗೆ ಹೋದ್ರೂ ಕ್ಯಾಮೆರಾ ತಗೊಂಡು ಹೋಗೋದನ್ನ ಮರೀಬೇಡಿ..

ಬರೋವಾಗ ಪುಲ್ಲಾ ರೆಡ್ಡಿ ಸ್ವೀಟ್ಸ್ಗೆ ಹೋಗಿ ಸಕ್ಕತ್ ಸ್ವೀಟ್ಸ್! ಬರೀ ತುಪ್ಪದಲ್ಲೇ ಮಾಡಿರೋದು!! ಒಮ್ಮೆ ತಿಂದು ನೋಡಿ... ಕೆಜಿಗಟ್ಟಲೆ ತಗೊಂಡು ಬರ್ತೀರಾ!!!

ಬೆಂಗಳೂರಿಗೆ/ನಿಮ್ಮ ಊರಿಗೆ ಬಂದ ಮೇಲೆ ನಿಮ್ಮ ಹೈದರಾಬಾದ್ ಅನುಭವ ಹೇಗಿತ್ತು ತಿಳಿಸಿ.

ಹೈದರಾಬಾದ್ನಲ್ಲಿ ಎರಡು ಬೇಸಿಗೆ,ಮಳೆ ಮತ್ತೊಂದೂವರೆ ಛಳಿಗಾಲ ನೋಡಿದ್ದೆ. ಅಲ್ಲಿಂದ ಟ್ರಾನ್ಸ್ಫರ್ ಮಾಡಿ ಅಂತ ಒಂದೇ ಸಮನೆ ಗೋಳೊಯ್ಕೊಂಡು ಬೆಂಗಳೂರಿಗೆ ಬಂದ ಮೇಲೆ ಹೈದರಾಬಾದ್ನ ತುಂಬಾ ಮಿಸ್ ಮಾಡ್ಕೊಂಡೆ! ಅದ್ಯಾಕೋ ಗೊತ್ತಿಲ್ಲ ಹೈದರಾಬಾದ್ ಮಾತ್ರ ಸಿಕ್ಕಾಪಟ್ಟೆ ಇಷ್ಟವಾಯ್ತು..ಇದೆಲ್ಲ ಬರೀವಾಗ ನಾನೇ ಹೈದರಾಬಾದ್ಗೆ ಹೋಗಿ ಬಂದಂತಾಯ್ತು.

-ಸವಿತ
(ಚಿತ್ರ ಕೃಪೆ : ವಿಕಿಪೀಡಿಯಾ)

5 comments:

Srivathsa Joshi said...

ಸವಿತಾ, ನಮಸ್ಕಾರ‍. "ವೋ ಸಬ್ ಬಾದ್ ಮೇ ದೇಖೆಂಗೆ" ಎಂದು ಹೇಳಿದರೆ ಹೈದರಾಬಾದ್ಮೇ ಯಾ ಸಿಕಂದರಾಬಾದ್ಮೇ? ಎಂದು ಜೋಕ್ ಮಾಡುತ್ತಿದ್ದೆ ನಾನು, 1992-96ರ ಅವಧಿಯಲ್ಲಿ ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದಾಗ. ನೀವು ಮೆನ್ಷನಿಸಿರುವ ಸುಮಾರಷ್ಟು ಜಾಗಗಳಿಗೆಲ್ಲ ಆಕಾಲದಲ್ಲೇ ದಾಳಿಯಿಟ್ಟಿದ್ದೆ. ಆಫ್‌‍ಕೋರ್ಸ್ ’ಸ್ನೋ ವರ್ಲ್ಡ್’ ಮುಂತಾದವೆಲ್ಲ ಆಗ ಇರಲಿಲ್ಲ, ಹಾಗಾಗಿ ನೋಡಿಲ್ಲ :-)

ಸಿಕಂದರಾಬಾದ್‌ನಲ್ಲಿ ಪಾರಡೈಸ್ ಹೊಟೆಲ್ ಅಂತ ಬರೆದ್ರಲ್ಲ, ಅಲ್ಲೇ ಇನ್ನೊಂದು ’ಗಾರ್ಡನ್’ ರೆಸ್ಟೊರೆಂಟ್ ಅಂತಿದೆ, ಅಲ್ಲಿ ಖ್ಯಾತ (& ವಿವಾದಾತ್ಮಕ) ಚಿತ್ರಕಲಾವಿದ ಎಂ.ಎಫ್.ಹುಸೇನ್ ಸಹ ಇರಾನಿ ಚಾಯ್ ಕುಡಿಯಲಿಕ್ಕೆ ಬರುತ್ತಿದ್ದರು. ಒಮ್ಮೆ ನಾನೇ ನೋಡಿದ್ದೇನೆ.

ಕನ್ನಡಿಗರ ಯಜಮಾನ್ಯದ "ಬೆಲ್ಸನ್ಸ್ ತಾಜ್’ ಹೊಟೆಲ್ (ರೆಸ್ಟೋರೆಂಟ್ & ಲಾಡ್ಜಿಂಗ್) ಬಹಳ ಚೆನ್ನಾಗಿದೆ (ಇತ್ತು ಆಗ, ಈಗ ಗೊತ್ತಿಲ್ಲ).

ಇರಲಿ, ಹೈದರಾಬಾದ್ ವೈಭವದಿಂದ ನಿಮ್ಮ ಬ್ಲಾಗ್ ಆರಂಭಿಸಿದಕ್ಕೆ ಅಭಿನಂದನೆ. ಹೀಗೆಯೇ ಉತ್ಸಾಹದಿಂದ ಬರೆಯುತ್ತಿರಿ. ನಿಮಗೆ ಒಳ್ಳೆಯದಾಗಲಿ.

SavithaSR said...

ಅಭಿನಂದನೆಗಳಿಗೆ ಧನ್ಯವಾದಗಳು ಸಾರ್, ನಿಮ್ಮ ಪ್ರತಿಕ್ರಿಯೆ ಓದಿ ಖುಷಿಯಾಯ್ತು :) ನೀವು ನಮ್ ಕಾಲೇಜಿನ ಸೀನಿಯರ್ ಅಷ್ಟೇ ಅಲ್ದೆ ಹೈದರಾಬಾದ್‌ ಅನುಭವದ ವಿಚಾರದಲ್ಲೂ ಸೀನಿಯರ್ರೇ ಸರಿ.:)

>>ಎಂ.ಎಫ್.ಹುಸೇನ್ ಸಹ ಇರಾನಿ ಚಾಯ್ ಕುಡಿಯಲಿಕ್ಕೆ ಬರುತ್ತಿದ್ದರು
ವಾವ್! ಜರೂರ್ ಕುಚ್ ಬಾತ್ ಹೈ ಚಾಯ್ ಮೆ!! :)

ನಲ್ಮೆಯ
-ಸವಿತ

ಮಂಸೋರೆ said...

ನಾನು ನಾಲ್ಕು ವರ್ಷದ ಹಿಂದೆ ಹೈದರಾಬಾದ್ ಗೆ ಹೋಗಿದ್ದೆ... ಆದ್ರೆ ನಿಮ್ಮ ಲೀಸ್ಟಲ್ಲಿರೋ ಹೈದರಾಬಾದ್ ಬಿರಿಯಾನಿ ಸ್ವೀಟ್ ಪಾನ್ ಮಾತರ ತಿಂದಿದ್ದೇ ಲಾಭ ಮತ್ತ್ಯಾವುದನ್ನು ನೋಡಲಾಗಲಿಲ್ಲ... ಫಿಲಮ್ ಸಿಟೀನ ಮಾತ್ರ ಫುಲ್ ಸ್ಕ್ಯಾನ್ ಮಾಡಿದೆ... ಯಾಕಂದ್ರೆ ನಾನ್ ಹೋಗಿದ್ ಕೆಲಸ ಅಲ್ಲೇ ಇದ್ದದ್ದು... ಅಂದ್ರೆ ಒಂದು ಜಾಹಿರಾತು ಚಿತ್ರೀಕರಣಕ್ಕೆ ಹೋಗಿದ್ವಿ. ಅಲ್ಲೇ ಒಂದು ವಾರ ಠಿಕಾಣಿ.
ಫಿಲಂ ಸಿಟಿಗೆ ಹೋಗೋರಿಗೆ ಈ ಮಾಹಿತಿ ಫಿಲಮ್ ಸಿಟಿಗೆ ಎರೆಡು ಮಾರ್ಗವಾಗಿ ಹೋಗಬಹುದು. ಮೈನ್ ರೊಡ್ ಎಲ್ರು ಹೋಗೋದು. ಆದ್ರೆ ಆಟೋಗಳು ಮತ್ತು ಪ್ರೈವೇಟ್ ಟ್ಯಾಕ್ಸಿಗಳು ಹಳ್ಳಿಗಳ (ಹಳ್ಳಿಗಳು ಈಗ ಇದೆಯೋ ಇಲ್ವೋ ಗೊತ್ತಿಲ್ಲ) ಮಾರ್ಗವಾಗಿ ಶಾರ್ಟ್ ಕಟ್ ಹೋಗುತ್ತವೆ. ಅಲ್ಲೊಂದು ಸಣ್ಣ ನಾನ್ ವೆಜ್ ಹೋಟೆಲ್ ಇದೆ. ಈ ಹೋಟೆಲ್ ಫೇಮಸ್ ... ಫಿಲಂಸಿಟಿಗೆ ಯಾರೇ ದೊಡ್ದ ನಟ, ನಿರ್ದೇಶಕರು ಬಂದ್ರೆ ಅವರಿಗೆ ನಾನ್ವೆಜ್ ಪಾರ್ಸಲ್ ಹೋಗೋದು ಇಲ್ಲಿಂದಲೇ.. ಆ ಬಿಗ್ ಲೀಸ್ಟಲ್ಲಿ ಚಿರಂಜೀವಿ.. ನಿರ್ದೇಶಕ ಶಂಕರ್.. ರಜನಿಕಾಂತ್ ಮುಂತಾದವರು ಇದ್ದಾರೆ.

SavithaSR said...

ಹೌದಾ? "ಚಟ್ನೀಸ್" ಅಂತ ಹೋಟೆಲ್ ಒಂದಿದೆ ಅಲ್ಲಿಯೂ ಕೂಡ ಹೀಗೇ ದೊಡ್ಡ ನಟರಿಗೆ ಇಷ್ಟವಾದ ತಿನಿಸುಗಳು ಸಿಗುತ್ತವೆ.
ಯಾವ ಜಾಹಿರಾತು ಚಿತ್ರೀಕರಿಸಿದ್ದು?
ಮತ್ತೊಮ್ಮೆ ಹೈದರಾಬಾದ್ಗೆ ಹೋಗಿ ಎಲ್ಲಾ ನೋಡ್ಕೊಂಡು ಬರಲು ನಿಮಗೊಂದು ರೀಸನ್/ಕೆಲಸ ಬೇಗ ಸಿಗಲಿ ಅಂತ ಹಾರೈಸುವೆ.
ಧನ್ಯವಾದಗಳು
-ಸವಿತ

rohit said...

Good one, keep update us with your new experience you had in new places.