Thursday, November 26, 2009

ಸಿಕ್ಸ್ತ್ ಸೆನ್ಸ್ ಮಿಸ್ಟ್ರಿ ಮ್ಯಾನ್ - ಪ್ರಣವ್ ಮಿಸ್ಟ್ರಿ

ನಾವು ಜೀವಿಸುತ್ತಿರೋ ನೈಜ ಜಗತ್ತು ಮತ್ತು ಕಂಪ್ಯೂಟರಿನ ಒಳ ಜಗತ್ತು ಭೌತಿಕ ನೆಲೆಯಲ್ಲಿ ಬೇರೆ ಬೇರೆಯೇ ಸರಿ.

ಏ ಬಾ.. ಇಲ್ಲಿ ಎಂದು ಕೈ ಸನ್ನೆ ಮಾಡಿ ಕೂಗಿದರೆ.. ಎದುರಿಗಿದ್ದವರು ನಮ್ಮ ಬಳಿ ಬರೋ ರೀತಿಯಲ್ಲಿ....ಕೀಲಿಮಣೆ ಬಳಸದೇ ಬರೀ ಅಂಗಸನ್ನೆಗಳ ಮೂಲಕ ಕಂಪ್ಯೂಟರ್ಗೆ ಸನ್ನೆ ಮಾಡಿ ಏನಾದ್ರು ಹೇಳಿದ್ರೆ ಊಹಿಸಿಕೊಳ್ಳಿ!! ಅದು ಅರ್ಥಮಾಡಿಕೊಳ್ಳುತ್ತಾ?? ಇಲ್ವಾ!!
ಇದೆಂತಹ ಸಿಲ್ಲಿ ಪ್ರಶ್ನೆ ಅಂತೀರಾ?!!ಮುಂದೆ ಓದಿ..

ನೀವು ಕಾಗದದ ಮೇಲೆ ಬರೆದಂತೆಲ್ಲಾ..ಆ ಸಾಲುಗಳು ನೇರವಾಗಿ ನಿಮ್ಮ ಮೊಬೈಲ್ನಲ್ಲಿ ಮೆಸೇಜಾಗಿ ಬಂದರೆ!

ಹಾಗೇ ಚಿಕ್ಕಂದಿನಲ್ಲಿ ನಮ್ಮ ಪುಟಾಣಿ ಕೈಗಳನ್ನ ಕಣ್ ಸುತ್ತ ಹಿಡಿದು ಕಂಡ ಅಚ್ಚರಿಯ ದೃಶ್ಯಗಳನ್ನ ಸೆರೆ ಹಿಡಿದು "ಕ್ಲಿಕ್" ಎಂದು ಬಾಯಲ್ಲಿ ಹೇಳಿ ಅದನ್ನ ಮನಸ್ಸಿನ ಮೂಲೆಯಲ್ಲಿ ಸೇವ್ ಮಾಡುವ ರೀತಿ, ಈಗಲೂ ಕೂಡ ಖಾಲಿ ಕೈಗಳಲ್ಲಿ ಕ್ಲಿಕ್ ಮಾಡಿದಾಗ ನಿಜವಾದ ಡಿಜಿಟಲ್ ಫೊಟೊ ಬಂದರೆ ಹೇಗಿರತ್ತೆ?!!

ಹುಡುಕು ಪದ ಟೈಪಿಸದೆ! ಗೂಗಲ್ ಮ್ಯಾಪ್ನಲ್ಲಿ ನಮಗೆ ಬೇಕಾದ ವಿಚಾರವನ್ನ ಹುಡುಕುವಂತಿದ್ದರೆ.. ಉದಾ: ಮ್ಯಾಪ್ ಮೇಲೆ ಕಾಫಿ ಕಪ್ ಇಟ್ಟರೆ ಕಾಫಿ ಶಾಪ್ ಎಲ್ಲಿವೆ, ಎಟಿಎಂ ಕಾರ್ಡ್ ಇಟ್ಟರೆ ಎಟಿಎಂ ಸೆಂಟರ್ ಎಲ್ಲಿವೆ ಎಂದು ತೋರಿಸುವಂತಿದ್ದರೆ!!

ಕಾಗದದ ನ್ಯೂಸ್ ಪೇಪರಿನಲ್ಲಿ ಲೈವ್ ನ್ಯೂಸ್ ವೀಡಿಯೋ ನೋಡುವಂತಿದ್ದರೆ!!

ಕೈಲಿ ಹಿಡಿದ ಬಿಳಿ ಕಾಗದದಲ್ಲಿ ಸಿನೆಮಾ ನೋಡುವಂತಿದ್ದರೆ,ಕಾರ್ ರೇಸಿಂಗ್ ಗೇಮ್ ಆಡುವಂತಿದ್ದರೆ!!
.
.
ಇವೆಲ್ಲಾ ಬರೀ ಸಿನೆಮಾಗಳಲ್ಲಿ ನೋಡಬಹುದು ಅಂತೀರಾ? ಇಲ್ಲ ಈಗ ಇವೆಲ್ಲ ನಿಜವಾಗುವ ದಿನಗಳು ದೂರಿಲ್ಲ...
ಹೀಗೇ ಕೀಲಿಮಣೆಯಿಲ್ಲದೆಯೆ...ಕಂಪ್ಯೂಟಿಂಗ್ ಡಿವೈಸ್ ಸಹಾಯದಿಂದ...ಬರೀ ಕೈಬೆರಳುಗಳ ಮೂಲಕ ನಾವು ಡಿಜಿಟಲ್ ಪ್ರಪಂಚದ ಒಳ ಹೋಗುವುದಕ್ಕೆ ಅವೆಷ್ಟೊಂದು ರೀತಿಯ ಸಾಧನಗಳನ್ನ... ಕಳೆದ 8 ವರ್ಷಗಳ ತಮ್ಮ ಸಂಶೋಧನೆಗಳಿಂದ ಸಾಕಾರ ಮಾಡಿ "ಸಿಕ್ಸ್ತ್ ಸೆನ್ಸ್ ಡಿವೈಸ್" ತಯ್ಯಾರು ಮಾಡಿರುವ ಮಿಸ್ಟ್ರಿ ಮ್ಯಾನ್ - ಪ್ರಣವ್ ಮಿಸ್ಟ್ರಿ.

ಈ ನವೆಂಬರ್ ಶುರುವಿನಲ್ಲಿ ಮೈಸೂರಿನಲ್ಲಿ ನಡೆದ ಇಂಡಿಯಾ TED ಸಮ್ಮೇಳನದಲ್ಲಿ ಪ್ರಣವ್ ಮಿಸ್ಟ್ರಿ ಕೊಟ್ಟ ಟಾಕಿನ ವೀಡಿಯೋ ಇಲ್ಲಿದೆ ನೋಡಿ. ಸಕತ್ ಕುತೂಹಲಕಾರಿಯಾಗಿದೆ!! :)

MIT Media Labನಲ್ಲಿ PhD ಮಾಡುತ್ತಿರುವ ಪ್ರಣವ್ ಮಿಸ್ಟ್ರಿ ಗುಜರಾತಿನ ’ಪಾಲನ್ಪುರ್’ನವರು. ಹಾಗೇ ಇಷ್ಟೊಂದು ಅಚ್ಚರಿ ಮೂಡಿಸಿರುವ ಈ "ಸಿಕ್ಸ್ತ್ ಸೆನ್ಸ್ ಡಿವೈಸ್ನ" ಹಿಂದಿರುವ ತಂತ್ರಾಂಶವನ್ನ ಓಪನ್ ಸೋರ್ಸ್ ಮಾಡುವರೆಂದು ಕೂಡ ಹೇಳಿದ್ದಾರೆ!!! :)

TED-Ideas Worth Spreading ಬಗ್ಗೆ ಹೆಚ್ಚಿನ ವಿವರಗಳಿಗೆ ಇಲ್ಲಿ ನೋಡಿ.

ಧನ್ಯವಾದಗಳು
-ಸವಿತ

2 comments:

HNS said...

ಅಚಾನಕ್ ಆಗಿ ನಿಮ್ಮ ಬ್ಲಾಗ್‍ನ ಪರಿಚಯವಾಯಿತು. ನಿಮ್ಮ ಬರಹಗಳ ಶೈಲಿ ಚೆನ್ನಾಗಿದೆ. ನೀವು ವಿಜ್ಞಾನ ಲೇಖನಗಳನ್ನು ಇಷ್ಟು ಸ್ವಾರಸ್ಯಕರವಾಗಿ ಬರೆಯುತ್ತಿರುವುದು ಖುಷಿ ತಂದಿದೆ. ನಿಮ್ಮ ಲೇಖನಗಳನ್ನು ಪತ್ರಿಕೆಗಳಿಗೂ ಕಳುಹಿಸಿ.

ಕೊನೆಗೆ, ಇಷ್ಟು ದಿನ ನಾನೇಕೆ ನಿಮ್ಮ ಬ್ಲಾಗ್‍ನ ಕದವ ತೆರೆಯಲಿಲ್ಲ ಅನ್ನಿಸಿತು. ನಿಮ್ಮ ಚಿತ್ತದಿಂದ ಹೊಮ್ಮುವ ಬೆಳಕು ಮತ್ತಷ್ಟು ಪ್ರಜ್ವಲಿಸಲಿ.

ಶುಭಾಕಾಂಕ್ಷೆಗಳೊಂದಿಗೆ

ಹಾಲ್ದೊಡ್ಡೇರಿ

SavithaSR said...

ವಾವ್!! ಧನ್ಯವಾದಗಳು ಸಾರ್, ತಮ್ಮ ಪ್ರತಿಕ್ರಿಯೆ ಓದಿ ತುಂಬಾ ಖುಷಿಯಾಯ್ತು ಮತ್ತು ಮತ್ತಷ್ಟು ಹುಮ್ಮಸ್ಸು ಬಂತು.
Art of Science ಮತ್ತು Science of Art ಫ಼್ಯೂಶನ್ ನನ್ನ ನೆಚ್ಚಿನ ಸಬ್ಜೆಕ್ಟು :)
ತಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು.
-ಸವಿತ