Sunday, November 29, 2009

ನೀರವತೆ!












 



ಇದೇನು ಕಕ್ಕುಲತೆಯೋ ಕಾಣೆ!!
ಇರೆಂದೊಡನಿರದೆ...
ಬಿಡದೆ ತಿರು ತಿರುಗಿ ಬಂದು
ಮನಸಿನುಲ್ಲಾಸಗಳ
ಹುಚ್ಚೆದ್ದು ಕುಣಿಸಿ
ರಮಿಸಿ ವಿರಮಿಸಿ
ಶಾಂತವೆನುತಿರುವಾಗ
ಮತ್ತದೇ ನೀರವತೆ!

ಮನದ ದುಗುಡವನೆಲ್ಲ
ಕಿತ್ತೊಗೆದು
ಅಣಿಯಾದಂತೆಲ್ಲ...
ತಿರುತಿರುಗಿ ಕಾಡುವಾ...
ನೀರವತೆ!

-ಸವಿತ

9 comments:

ಅನಿಲ್ ರಮೇಶ್ said...

ಸಖತ್ :)

-ಅನಿಲ್

SavithaSR said...

:) ಥ್ಯಾಂಕ್ಸ್ ಅನಿಲ್

Anonymous said...

ಕವನ - ಲೇಖನ - ಚಿತ್ರ - ವಿಜ್ಞಾನ... ನೀವು multi talented ಕಣ್ರೀ!

Manju said...

jack of all

ಸಿಮೆಂಟು ಮರಳಿನ ಮಧ್ಯೆ said...

ಸವಿತಾರವರೆ...

ತುಂಬಾ ಸೊಗಸಾಗಿದೆ...!!

ಪ್ರತಿ ಪದಗಳು
ಅದರ ಭಾವಗಳು ಇಷ್ಟವಾದವು...

ಚಂದದ ಸಾಲುಗಳಿಗೆ ಅಭಿನಂದನೆಗಳು...

SavithaSR said...

ಧನ್ಯವಾದಗಳು ಮಂಜು,Anonymous ಮತ್ತು ಪ್ರಕಾಶವರೇ :)
-ಸವಿತ

Parisarapremi said...

ನೀರವತೆಯು ಬ್ರಹ್ಮಾನುಭವವನ್ನೂ ಕೊಡುತ್ತೆ!! :-)

ಚೆನ್ನಾಗಿದೆ ಕವನ..

SavithaSR said...

ಧನ್ಯವಾದಗಳು ಪರಿಸರಪ್ರ‍ೇಮಿಗಳೆ :)
ಬ್ರಹ್ಮಾನುಭವವೆಂದರೆ?!

Parisarapremi said...

ನಿಮಗೆ ಆಗಿದೆಯಲ್ಲಾ, ಅದೇ ರೀತಿಯ ಅನುಭವ! :-)