ಒಂದು ದಿನ..
ಯಾರೋ..
ದೂರ ನಿಂತು
ಹತ್ತಿರಕ್ಕೆ ಒಂದು ಕ್ಷಣ ಬಂದು
ಪಿಸು ಮಾತಿನಲ್ಲಿ
ಹೇಳಿಬಿಡುತ್ತಾರೆ,
ಜೀವನವಿಡೀ ಕೇಳಬೇಕೆಂದು
ಬಯಸಿ ಕಾದಿದ್ದ
ಆ ಮಾತು!
ಆ ಯಾರೋ
ಮತ್ತು
ಆ ಮಾತು
ಬದುಕಿನಲ್ಲಿ ಯಾವಾಗಲೂ
ನೆನಪಿಡುವ ಘಟನೆಯಾಗಿ
ಉಳಿದುಬಿಡುತ್ತವೆ. :)
ನೀವು ಕಾದಿದ್ದೀರಾ?
ಅದು ಯಾರೋ?
-ಸವಿತ
ಯಾರೋ..
ದೂರ ನಿಂತು
ಹತ್ತಿರಕ್ಕೆ ಒಂದು ಕ್ಷಣ ಬಂದು
ಪಿಸು ಮಾತಿನಲ್ಲಿ
ಹೇಳಿಬಿಡುತ್ತಾರೆ,
ಜೀವನವಿಡೀ ಕೇಳಬೇಕೆಂದು
ಬಯಸಿ ಕಾದಿದ್ದ
ಆ ಮಾತು!
ಆ ಯಾರೋ
ಮತ್ತು
ಆ ಮಾತು
ಬದುಕಿನಲ್ಲಿ ಯಾವಾಗಲೂ
ನೆನಪಿಡುವ ಘಟನೆಯಾಗಿ
ಉಳಿದುಬಿಡುತ್ತವೆ. :)
ನೀವು ಕಾದಿದ್ದೀರಾ?
ಅದು ಯಾರೋ?
-ಸವಿತ

12 ಕಾಮೆಂಟ್(ಗಳು):
ಜೀವನವಿಡೀ ಕಾಯುವ ಆ ಪಿಸುಮಾತು ತುಂಬಾ ಮಹತ್ವ ಇರುತ್ತೆ ಅಲ್ವಾ?
ಕಬ್ಬಿಣ ಕಾದಾಗಲೇ ಮೆತ್ತಗಾಗೋದು ಅಂತಾರೆ. ಅದಕ್ಕೇ ಇರಬೇಕು, ಹುಡುಗಿಯರು ಹುಡುಗರನ್ನು ನೂರಾರು ದಿನಗಳವರೆಗೆ ಕಾಯಿಸಿ, ಅವರನ್ನು ಮೆತ್ತಗೆ ಮಾಡಿದ ಮೇಲೆಯೇ ಆ ಮಧುರ ಮಾತುಗಳನ್ನು ಹೇಳಿ, ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಾರೆ ಅನ್ಸುತ್ತೆ.
ಪ್ರೇಮಿಗಳಿಗೆ, ಪ್ರೇಮಿಗಳ ಹಬ್ಬದ ದಿನದ ಶುಭಾಷಯಗಳು.
ಇಂತಿ,
ಯಳವತ್ತಿ
www.shivagadag.blogspot.com
ಹೌದೌದು, ಈ ಪ್ರೀತಿಯೇ ಹೀಗೆ, ಅರ್ಥವಾದವರಿಗೆ ಅರ್ಥವಾಗುತ್ತೆ, ಅರ್ಥವಾಗದವರಿಗೆ ಆಗಲ್ಲ! ಯಾರೂ ಏನೂ ಹೇಳಲಿ ಬಿಡಿ, ನಾನೆನ್ನುತ್ತೇನೆ, ನಿಮ್ಮ ನವ್ಯ-ಕಾವ್ಯ ಚೆನ್ನಾಗಿದೆ!
ಹೌದು, ಆದರೆ ಹೇಳಲು ಕೇಳಲು ಸಮಯ ಸಂಧರ್ಭ ಇರಬಾರದು.... ಪ್ರೀತಿ, ಎಂದೆಂದಿಗೂ ಸಂಭವಿಸಲಿ, ಸಂಚರಿಸಲಿ..... ಮೊದಲ ಸಾಲಿ, ಆ ಮಾತನ್ನು ಕೇಳಲು, ಹೇಳಲು ಇದೆ ದಿನಕ್ಕಾಗಿ ಕಾಯಬೇಕಿಲ್ಲ.... ಚೆನ್ನಾಗಿದೆ ನಿಮ್ಮಕವನ.....
ಒಳ್ಳೆಯ ಮಾತು
ಪ್ರೇಮಿಗಳ ದಿನಕ್ಕೆ ಒಪ್ಪುವಂತ ಕವನ
nice feeling and poem...!
ಹೌದು ಶಿವು, ಆ ಪಿಸುಮಾತಿನ ಕ್ಷಣ ನಿಮಗೆ ಬೇಗ ಬರಲಿ ಎಂದು ಹಾರೈಸುವೆ :)
>>ಅದಕ್ಕೇ ಇರಬೇಕು, ಹುಡುಗಿಯರು ಹುಡುಗರನ್ನು ನೂರಾರು ದಿನಗಳವರೆಗೆ ಕಾಯಿಸಿ..
ಹು ಹೂಂ..ಈ ಮಾತನ್ನು ನಾನೊಪ್ಪೆನು..ಹುಡುಗರೇನು ಕಡಿಮೆಯೇ ಕಾಯಿಸುವುದರಲ್ಲಿ!! :)
ಮತ್ತೊಮ್ಮೆ ಶುಭಾಷಯಗಳೊಂದಿಗೆ
-ಸವಿತ
ಹೌದು ವಿ.ಆರ್.ಭಟ್ರೇ,
ಈ ಪ್ರೀತಿಯೇ ಹೀಗೆ,
ಅರ್ಥವಾದವರಿಗೆ ಇಷ್ಟಾರ್ಥ!
ಆಗದವರಿಗೆ ಕಷ್ಟಾರ್ಥ!
ಒಟ್ಟಾರೆ ಆಗದಿದ್ದರೆ ಸಾಕು ಅನರ್ಥ! :)
ಧನ್ಯವಾದಗಳು
-ಸವಿತ
>>ಪ್ರೀತಿ ಎಂದೆಂದಿಗೂ ಸಂಭವಿಸಲಿ, ಸಂಚರಿಸಲಿ...
ವಾವ್! ಚೆಂದನೆಯ ಸಾಲಿಗೆ ಧನ್ಯವಾದಗಳು ದಿನಕರ ಮೊಗೇರರೆ :)
-ಸವಿತ
ಡಾಕ್ಟ್ರೇ ಮತ್ತು ವಿಜಯಶ್ರೀಯವರೆ
ಕವನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್ :)
-ಸವಿತ
ಸವಿಯಾದ ಸಾಲುಗಳಲಿ
ಮೋಹಕ ಭಾವಗಳು..
ಚೆ೦ದದ ಕವನ.
ಡಾಕ್ಟರ ಬಗ್ಗೆ ನನಗೆ ಗೊತ್ತಿಲ್ಲ..
ಹ್ಹ ಹ್ಹ ಹ್ಹ ಹ್ಹ
ಕವನ ತುಂಬಾ ಚೆನ್ನಾಗಿದೆ ಇಷ್ಟವಾಯ್ತು.
Post a Comment