Monday, March 29, 2010

ದಿಬ್ಬಣ..ಮದುವೆ..ಸಂಭ್ರಮ!

Monday, March 15, 2010

ಎಚ್ಚರವಾಗಿರ್ಬೇಕು!!


ಹೊಸ ಜವಾಬ್ಧಾರಿಗಳು ಬಂದಾಗ ಬಹಳ ಎಚ್ಚರವಾಗಿರ್ಬೇಕು :)

ಸಮಯ ಬೆಳಗ್ಗೆ ಸುಮಾರು ಹನ್ನೊಂದೂವರೆ, ಆಫೀಸಲ್ಲಿ ಕಂಪ್ಯೂಟರ್ ಪರದೆಯ ಮೇಲೆ ದಿಟ್ಟಿಸಿ ನೋಡುತ್ತಾ ದೀರ್ಘಾಲೋಚನೆಯಲ್ಲಿ ತಲ್ಲೀನಳಾಗಿ ಕೆಲಸ ಮಾಡೋವಾಗ ಅದೊಂದು ಮಿಂಚಿನ ಕ್ಷಣ ಹಾಯ್ದು ಬಂತು...ತಟ್ಟನೆ ನೆನಪಾಯ್ತು...

"ಬೆಳಗ್ಗೆ ಮನೆಯಿಂದ ಬರೋವಾಗ ಉರಿಯುತ್ತಿದ್ದ ಗ್ಯಾಸ್ ಸ್ಟವ್ ಆಫ್ ಮಾಡಿದ್ನಾ ಇಲ್ವಾ ಅಂತ!?!!"

ಟೈಮ್ ನೋಡಿದೆ...ಹನ್ನೊಂದೂವರೆ, ನಾ ಮನೆ ಬಿಟ್ಟದ್ದು ಬೆಳಗ್ಗೆ ಎಂಟೂವರೆ..ಸರಿಯಾಗಿ ಮೂರು ಗಂಟೆಗಳು ಕಳೆದಿವೆ! ತಕ್ಷಣ ಒಂದೇ ಉಸಿರಿಗೆ ಪರ್ಸ್, ಮನೆ ಕೀ ತೆಗೆದವಳೇ ಓಡಿದೆ...ಪುಣ್ಯಕ್ಕೆ ಆಫೀಸ್ ಹೊರಗಡೆ ಆಟೋದವನಿದ್ದ, ಹತ್ತಿದವಳೇ...

"ಕೋರಮಂಗ್ಲ...ಸಿಕ್ಕಾಪಟ್ಟೇ ಎಮ್ಮರ್ಜೆನ್ಸಿ..." 

ಅಂತ ನಾ ಹೇಳಿ ಹತ್ತಿದ ರಭಸಕ್ಕೆ ಆ ಆಟೋಡ್ರೈವರ್ರೂ ಕೂಡ ಎಮ್ಮರ್ಜ್ನೆನ್ಸಿ ಸೆನ್ಸ್ ನೊಂದಿಗೆ ಹೊರಟ...

"ಮುಂದೆ ರೆಡ್ ಸಿಗ್ನಲ್ ಇದೆ ಕ್ರಾಸ್ ಮಾಡ್ಲಾ ಮೇಡಮ್"

(ಹೇಗಿದ್ರೂ 3 ಗಂಟೆ ಕಳೆದಿವೆ ಇನ್ನು ಒಂದೆರಡು ನಿಮಿಷ ಮುಂಚೆ ಹೋಗಿ ನಾ ಇನ್ನೇನನ್ನೂ ಮಾಡೋಕಾಗಲ್ಲ!!)
"ಬೇಡ ಸಿಗ್ನಲ್ ಗ್ರ‍ೀನ್ ಆದ್ಮೇಲೆ ಹೋಗಿ" ಅಂತಂದೆ.
ಮನೇಲಿ ಏನು ಏನಾಗಿದೆಯೋ ಅಂತ ಹೆದರಿಕೆಯಿಂದ ಬೆವೆತು ಹೋಗಿದ್ದೆ!!
ಮೈಂಡ್ನಲ್ಲಿ ಅವೆಷ್ಟೋ ಆಲೋಚನೆಗಳು ಒಂಚೂರು ಗ್ಯಾಪ್ ಕೊಡದೆ ಓಡ್ತಾ ಇದ್ವು...

.......
ಊರಿಗೆ ಹೊರಟಿದ್ದ ನಮ್ಮಮ್ಮ ಬೆಳಗ್ಗೆಯೇ ಬೇಗ ಎದ್ದು ಸಾರು ಅನ್ನ ಎಲ್ಲವನ್ನ ಮಾಡ್ತಿದ್ರು.
ಸಾರಿನಲ್ಲಿ ತರಕಾರಿ ಇನ್ನೂ ಬೆಂದಿರದಿದ್ದರಿಂದ ಇನ್ನಷ್ಟು ಹೊತ್ತು ಕುದಿಸಿ ಸ್ಟವ್ ಆಫ್ ಮಾಡು...
ಆಫೀಸ್ಗೋಗೋ ಮುಂಚೆ ಸ್ಟವ್, ಗೀಸರ್ ಆಫ್ ಆಗಿದೆಯಾ, ಬೀಗ ಹಾಕಿದೆಯಾ ಒಮ್ಮೆ ನೋಡಿಕೊಂಡು ಹೋಗು ಅಂತ ಹೇಳಿ ಹೊರಟ್ರು.
ಅಮ್ಮ ಹೊರಟ ಸ್ವಲ್ಪ ಹೊತ್ತಿಗೆ ಬೀಗ ಹಾಕಿ ಮನೆ ಬಿಟ್ಟ ನನಗೆ ಅದ್ಯಾಕೋ ಅವರು ಹೇಳಿದ ಯಾವ ಕೆಲಸವೂ ನೆನಪಾಗಲಿಲ್ಲ.
ಮತ್ತೆ ನೆನಪಾಗಿದ್ದು ಹನ್ನೊಂದೂವರೆಗೆ!!
.
.
ಮೂರು ಗಂಟೆಗಳವರೆಗೆ ಸಾರಿನ ಪಾತ್ರೆ ಸ್ಟವ್ ಮೇಲೆ!!
ಏನಾಗಿದೆಯೋ...ಏನು ಕತೆಯೋ?! ಅಂತ ಹೆದರಿಕೆ ಸಿಕ್ಕಾಪಟ್ಟೆ ಕಾಡುತ್ತಿತ್ತು!!
ಬಾಡಿಗೆ ಮನೆ ಬೇರೆ! ಅಕ್ಕ ಪಕ್ಕ ಹೊಂದಿಕೊಂಡಂತೆ ಸಾಲು ಮನೆಗಳು...
ಫಯ್ರ್ ಎಂಜಿನ್ನವರಿಗೆ ಈಗಲೇ ಕಾಲ್ ಮಾಡ್ಲಾ ಇಲ್ಲ? ಮನೆಗೆ ಹೋದ ಮೇಲೆ ಮಾಡ್ಲಾ?
ಅಮ್ಮಂಗೆ ಫೋನ್ ಮಾಡ್ಲಾ ಬೇಡ್ವಾ?!
ಕೆಳಗಿನ ಮನೆಯವರಿಗೆ ಹೇಳುವಾ ಅಂದ್ರೆ ಮನೆ ಕೀ ಬೇರೆ ನನ್ನ ಬಳಿಯಿದೆ!
ಹೊರಗಿನ ಸುಡು ಬಿಸಿಲನ್ನ ಕಂಡು ಯಾವ ಪ್ರತಿಕ್ರಿಯೆಯೂ ಬರಲಿಲ್ಲ!
ಸಂಜೆ ಬೇರೆ ಟೆಲಿಕಾನ್ ಇದೆ! ಇನ್ನೂ ಮೇಲ್ ಕಳಿಸಿಲ್ಲ, ಕ್ಯಾನ್ಸಲ್ ಕೂಡಾ ಮಾಡ್ಲಿಲ್ಲ!
ಏನು ಮಾಡಲಿ...ಏನು ಬಿಡಲಿ!?!
.......

ಆಟೋ ನಮ್ಮನೆ ರೋಡಲ್ಲಿ ಬರೋವಾಗ ಗಮನವೆಲ್ಲಾ ಮನೆಯ ಸುತ್ತ ಮುತ್ತಲೇ...
ಜನಗಳೇನಾದ್ರೂ ಜಮಾಯಿಸಿದ್ದಾರಾ?! ಕಿಟಕಿಯ ಬಳಿ ಹೊಗೆ ಏನಾದ್ರೂ ಬರ್ತಿದೆಯೇ?!!
ಅಬ್ಬಾ ಅವ್ಯಾವೂ ಇರ್ಲಿಲ್ಲ!! ಆಟೋದನವನ್ನ ಮನೆ ಮುಂದೆಯೇ ಇರಲು ಹೇಳಿ.. ಮೆಟ್ಟಿಲು ಹತ್ತಿ ಬೀಗ ತೆಗೆದವಳೇ ಅಡುಗೆ ಮನೆಗೆ ಓಡಿದೆ... 

ಸ್ಟವ್ ಆಫ್ ಆಗಿತ್ತು...!!!! ಬೆಳಗ್ಗೆ ನಾನೇ ಸ್ಟವ್ ಆಫ್ ಮಾಡಿದ್ದೆ!! :) :) :)

ಅದನ್ನ ಕಂಡು ಅಬ್ಬಾ!!! ಅದೆಷ್ಟು ನಿರಾಳವೆನಿಸಿತು!!!!!!!!! ಅಂದ್ರೆ ಆ ಅನುಭವವನ್ನ ಪದಗಳು ಹಿಡಿದಿಡಲಾರವು ಮತ್ತು ತಿಳಿಸಲಾರವು ಕೂಡ!!!
ಆ ಕ್ಷಣ ಏನು ಮಾಡಬೇಕಂತಾನೇ ತೋಚಲಿಲ್ಲ!!

ಒಂತರಾ ಬ್ಲಾಂಕ್!! : )
..............

ಆಮೇಲೆ ಬೀಗ ಹಾಕಿ ವಾಪಸ್ ಆಫೀಸಿಗೆ ಹೊರಟೆ, ಬರುವಾಗ ಅದೆಷ್ಟು ಗಾಬರಿಯೊಂದಿಗೆ ಬಂದೆ...ಹೋಗೋವಾಗ ನನ್ನ ಬಗ್ಗೆಯೇ ಅದೆಷ್ಟು ಸಿಲ್ಲಿಯೆನಿಸಿತು..ಆಟೋದವನಿಗೆ ಅದೇನು ಎಮ್ಮರ್ಜೆನ್ಸಿ ಅಂತ ಹೇಳುವ ಅಂತ ಅನಿಸಿತು... ಹೇಳಲಿಲ್ಲ...ಹೊರಗೆ ಅದೆಷ್ಟು ಬಿಸಿಲು ಇದೆ ಅಂತ ಈಗ ಅನ್ನಿಸ್ತಿತ್ತು.!! :)

...........

ಮನೆಗೆ ಸಂಜೆ ಬಂದು...ಹಾಲು ಕಾಯಿಸಲಿಟ್ಟಾಗ ಕಾಲ್ ಬಂತು...ಬೆಳಗ್ಗೆ ನಡೆದದ್ದನ್ನ ಒಂಚೂರೂ ಬಿಡದೆ ಎಕ್ಸ್ ಪ್ಲೇನ್ ಮಾಡ್ತಾ ಮಾಡ್ತಾ.....ಹಾಲು ಹುಕ್ಕಿ..ಹರಿದು ಪಾತ್ರೆ ಕರ್ರಗಾಗಿ...ಸೀದು ಹೊಗೆ ಬಂದಾಗ ನೆನಪಾಯ್ತು....

ಹಾಲು ಕಾಯಿಸಲಿಟ್ಟಿದ್ದೆ.....ಸ್ಟವ್ ಆಫ್ ಮಾಡಿಲ್ಲ ಅಂತ!! : )

ಈಗಲೇ ಹೀಗೆ ಇನ್ನು ಮುಂದಿನ ತಿಂಗಳಿಂದ ಹೇಗೋ ಕಾಣೆ!??!!!
ಅನ್ನಿಸ್ತಿದೆ ಹೊಸ ಜವಾಬ್ಧಾರಿಗಳು ಬಂದಾಗ ಬಹಳ ಎಚ್ಚರವಾಗಿರ್ಬೇಕು ಅಂತ! ಏನಂತೀರಾ : )


" ನಿಮಗೆಲ್ಲಾ ಯುಗಾದಿಹಬ್ಬದ  ಶುಭಾಶಯಗಳು :) "

ಧನ್ಯವಾದಗಳು
ಸವಿತ

(ಚಿತ್ರ ಕೃಪೆ: ಸ್ವಂತದ್ದು)