Monday, September 6, 2010

ಬದುಕು ಬದಲಿಸಬಹುದು!

ನಾ ಹತ್ತನೇ ತರಗತಿ ಮುಗಿಸಿದ ನಂತರ ನನ್ನಣ್ಣ ಕೊಟ್ಟ ಪುಟಾಣಿ ಪುಸ್ತಕ "ಬೆಳಕಿನೊಂದು ಕಿರಣ ಮೇಡಂ ಕ್ಯೂರಿ". ವಿಜ್ಞಾನದ ಬಗ್ಗೆ ಬೆರಗು ಮೂಡಿಸಿ ಹೆಚ್ಚು ಕಲಿಯಲು ಪ್ರ‍ೇರೇಪಿದ ಬರವಣಿಗೆಯದು. ಬರೆದವರು ನೇಮಿ ಚಂದ್ರ. ಆ ಪುಸ್ತಕದ ಮೊದಲ ಪುಟದಲ್ಲಿ ಓದಿದ ಅರ್ಪಣೆಯ ಸಾಲುಗಳು ಈ ದಿನಕ್ಕೂ ನೆನಪಿವೆ...

"ಚೆನ್ನಾಗಿ ಓದಮ್ಮ, ರ‍್ಯಾಂಕ್ ಬರಬೇಕು. ಈ ಕಸ ಮುಸುರೆಯಲ್ಲೇನಿದೆ? ಎಂದು ಸದಾ ಹುರಿದುಂಬಿಸಿದ, ಬಯಲು ಸೀಮೆಯ ಹಳ್ಳಿಗಾಡಿನ ಅಪ್ಪಟ ಅನಕ್ಷರಸ್ಥೆ ನನ್ನಮ್ಮನಿಗೆ"

ಪುಸ್ತಕ ಮುಗಿಯೊದರೊಳಗೆ ನನ್ನ ಮುಂದಿನ ಓದಿನ ದಾರಿ ಕಾಣಿಸತೊಡಗಿತ್ತು. ಕೊನೆಯ ಪುಟದಲ್ಲಿ ಇದ್ದ ಲೇಖಕರ ಬಗ್ಗೆ ಓದುತ್ತಾ ಹೋದಂತೆ..ಅನ್ನಿಸತೊಡಗಿತ್ತು... ನೇಮಿ ಚಂದ್ರ...ಅಬ್ಬಾ!! ಹೆಣ್ಮಗಳೊಬ್ಬಳು ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಬಹುದೇ....ನಾನೂ ಓದಬಾರದೇಕೆ ಅಂತ ಅವತ್ತೇ ಅನ್ನಿಸಿತ್ತು. ನಂತರ ನನ್ನ ಆಯ್ಕೆ ಕೂಡಾ ಅದೇ ಆಯ್ತು :)

ಅಂದಿನಿಂದ ಇಂದಿನವರೆಗೆ ಯಾವಾಗ ಲೈಫು ಡಲ್ ಅನಿಸಿದಾಗಲೆಲ್ಲಾ "ಬೆಳಕಿನೊಂದು ಕಿರಣ" ಪುಸ್ತಕ ಧೈರ್ಯ ತುಂಬಿ ಹೊಸ ಕನಸುಗಳನ್ನ ಕಾಣಲು ಸ್ಫೂರ್ತಿ ನೀಡುತ್ತಿದೆ.

ಮೊನ್ನೆ ಸಪ್ನ ಬುಕ್ ಸ್ಟಾಲಿಗೆ ಹೋದಾಗ ಹಾಗೇ ಕಣ್ಣಾಡಿಸುತ್ತಿರುವಾಗ ಕಂಡದ್ದು "ಬದುಕು ಬದಲಿಸಬಹುದು" - ನೇಮಿಚಂದ್ರ.. ಅರೆ ವಾವ್ ನನ್ನ ನೆಚ್ಚಿನ ಪುಸ್ತಕದ ಲೇಖಕರು...ಕೊನೆಯ ಪುಟದಲ್ಲಿ..ಮೊದಲ ಬಾರಿಗೆ..ಅವರ ಪೋಟೋ ನೋಡಿ ಸಕತ್ ಖುಷಿಯಾಯ್ತು. ಮನೆಗೆ ತಂದ ಪುಸ್ತಕ ಒಂದೆರಡು ದಿನ ಮನಃ ಪೂರ್ತಿಯಾಗಿ ಓದಿದೆ. : )

ಪ್ರತಿ ಪುಟಗಳಲ್ಲಿ ಅದೆಷ್ಟೊಂದು ಕಾನ್ಫಿಡೆನ್ಸ್ ತುಂಬಿದ ಬರಹಗಳು, ಕೆಲವು ಲೇಖನಗಳ ಶೀರ್ಷಿಕೆಗಳು ಹೀಗಿವೆ...

ಸಮಯವಿಲ್ಲವೆ ಹೇಳಿ
ಕನಸು ಕಾಣುವ ಬನ್ನಿ
ಸ್ನೇಹಕ್ಕೆ ಯಾವ ಸರಹದ್ದು
ಸೋಲಿಲ್ಲದ ಮನೆಯ ಸಾಸಿವೆ
ಜಗತ್ತು ಬದಲಾಗಬಹುದು
ಆಯ್ಕೆಯಿದೆ ನಮ್ಮ ಕೈಯಲ್ಲಿದೆ
ಬರೆದಿಡಿ....ಬರೆದಿಡಿ
ಆತ ಕೊಟ್ಟ ವಸ್ತು ಒಡವೆ, ನನಗೆ ಅವಗೆ ಗೊತ್ತು
ಮುಗಿಲು ಕೂಡ ಮಿತಿಯಿಲ್ಲ
ಬದುಕು...ನಿನ್ನಲ್ಲೆಂಥಾ ಮುನಿಸು
ಆದದ್ದೆಲ್ಲಾ ಒಳಿತು ಆಯಿತು
ಕತ್ತಲ ಹಾದಿಯಲ್ಲಿ ದೊಂದಿ ಹಿಡಿದು
ಕಾಸಿಲ್ಲದೆ ಕಲಿಸಿದ್ದು
ದುಡಿಯಬಲ್ಲೆವು ನಾವು
ಚಿಗುರಿಸಿ ಕನಸುಗಳನ್ನು
ಬದುಕು ಬರಿದಾಗದಿರಲಿ
.
.
.
.
.
ಇಷ್ಟು ಚೆಂದದ ಶೀರ್ಷಿಕೆಯ ಲೇಖನಗಳೊಂದಿಗೆ ಲೇಖಕಿಯವರು ನಮ್ಮ ದಿನ ನಿತ್ಯದ ಜೀವನವನ್ನ ಬೇರೆ ಪರಿಮಾಣದಲ್ಲೂ ನೋಡಬಹುದೆಂಬುದನ್ನ...ಕಲಿಸುವಿಕೆ ಪರಿ ಮಾತ್ರ... ತುಂಬಾ ತುಂಬಾ ಇಷ್ಟವಾಯ್ತು.
ನೀವೂ ಕೂಡ ಓದಿ, ಮೆಚ್ಚಿನ ಪುಸ್ತಕಗಳ ಸಾಲಿಗೆ ಈ ಪುಸ್ತಕದ ಹೆಸರು ಸೇರುವುದು ಖಂಡಿತ :)
ಧನ್ಯವಾದಗಳು
ಸವಿತ

10 comments:

ದಿನಕರ ಮೊಗೇರ.. said...

dhanyavaada maahitige....
khandita konDu oduttene...

Aravinda said...

ನನಗೂ ಓದಬೇಕೆನಿಸುತ್ತಿದೆ.. ಪುಸ್ತಕ ಪರಿಚಯಿಸಿದ್ದಕ್ಕೆ ಧನ್ಯವಾದಗಳು :)

ಸಾಗರಿ.. said...

ಖಂಡಿತ ಕೊಂಡು ಓದುವೆ, ಮನೆಯಲ್ಲಿ ಅಂತಹ ಪುಸ್ತಕವಿದ್ದರೆ ಅದು ಅಪ್ಪಿ ತಪ್ಪಿಯಾದರೂ ಮಕ್ಕಳ ಕಣ್ಣೀಗೆ ಬಿದ್ದು ,ಅವರೂ ಓದಿ ಏನಾದರೂ ಒಳ್ಳೆಯದನ್ನು ಪಡೆದುಕೊಂಡರೆ ಮತ್ತೇನು ಬೇಕಿದೆ.

ಸುಮ said...

yes nemichandra is very inspiring.

SavithaSR said...

ಓದಿ ನಿಮ್ಮ ಪ್ರತಿಕ್ರಿಯೆ ತಿಳಿಸಿ ದಿನಕರ್, ಅರವಿಂದ್ :)

SavithaSR said...

ಧನ್ಯವಾದಗಳು ಸಾಗರಿ :)
>>ಅಪ್ಪಿ ತಪ್ಪಿ ಓದೋಕಿಂತ...ಮಕ್ಕಳಿಗೆ ನೀವೇ ಪುಸ್ತಕಗಳನ್ನ ಉಡುಗೊರೆಯಾಗಿ ಕೊಡಿಸಬಾರದೇಕೆ? :)

SavithaSR said...

ಹೌದು ಸುಮ :)

ಸಾಗರದಾಚೆಯ ಇಂಚರ said...

ಅದೇಗೆ ನಾನು ಓದಿಲ್ಲ ?

ಖಂಡಿತ ತೆಗೆದುಕೊಂಡು ಓದುತ್ತೇನೆ

ಪರಿಚಯಿಸಿದ್ದಕ್ಕೆ ವಂದನೆಗಳು

ಮನಮುಕ್ತಾ said...

ಒಳ್ಳೆಯ ಮಾಹಿತಿ.. ಧನ್ಯವಾದಗಳು.

Anonymous said...

ಅದ್ಭುತ ಪುಸ್ತಕ,,,,,, ನಾನೊಮ್ಮೆ ನೇಮಿ ಅಕ್ಕನನ್ನು ಭೇಟಿ ಮಾಡಿದಾಗ ಅವರ ಈ ಅಪರಿಮಿತ ವಿದ್ವತ್ತಿನ ಬಗ್ಗೆ ಪ್ರಶ್ನೆ ಕೇಳಿದ್ದೆ, ಏನು ಉತ್ತರಿಸದೆ ನಕ್ಕು ನನ್ನ ತಲೆಗೊಂದು ಮೊಟಕಿದ್ದರು,,,,,,,,,,, ಅವ್ವನ ಮನಸ್ಸಿನ ಅದ್ಭತ ಲೇಖಕಿ,,,, ನೆನಪಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸುಮಾ ಅವರೇ,