ತಿಂಗಳು ತುಂಬದ
ನನ್ನ ಕಂದಮ್ಮ
ರಚ್ಚೆ ಹಿಡಿದು
ಅತ್ತು ಕೂಗಿ ಕರೆವಾಗ
ಹಾಡಿ ತೂಗಿ ಮಲಗಿಸಲು
ಜೋಗುಳಗಳು ಬೇಕಿವೆ...
ಸದ್ಯಕ್ಕೆ ಗೊತ್ತಿರುವ
ಭಾವಗೀತೆಗಳನ್ನೇ
ತಿರು ತಿರುಗಿ
ಹಾಡಿ ಮಲಗಿಸುತ್ತಿರುವೆ!!
ಪ್ರಾಸ ಲಯಬದ್ದವಾಗಿ
ಹಳಬರು ರಚಿಸಿರುವ
ಸವಿಯಾಗಿ ಹಾಡಿ ಹೊಗಳಿ
ಮಕ್ಕಳನ್ನ ನಿದ್ರಾಲೋಕಕ್ಕೆ
ಕರೆದೊಯ್ಯುವ
ಲಾಲಿ ಪದಗಳಿರುವಾಗ...
ಭಾವಗೀತೆಗಳೇಕೆ?
ಇಷ್ಟು ಬೇಗ
ಎಂದೆನಿಸಿದೆ!
ಅದಕ್ಕೇ ಗೊತ್ತಿರುವವರು
ಬೇಗ ಹಂಚಿಕೊಳ್ಳಿ
ನಿಮ್ಮ ಬಳಿಯಿರುವ
ಲಾಲಿ ಪದಗಳನ್ನ
ಗೊತ್ತಿರದಿದ್ದರೆ ಕೇಳಿ ಬರೆಯಿರಿ
ನಿಮ್ಮ ಅಜ್ಜಿ, ತಾಯಿ,
ಸಹೋದರಿಯರನ್ನ :)
ಧನ್ಯವಾದಗಳು
ಸವಿತ ಎಸ್ ಆರ್
3 ಕಾಮೆಂಟ್(ಗಳು):
"ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು ..." ಮತ್ತು "ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದಾ, ಚಂದ್ರ ಮೇಲೆ ಬಂದಾ ..." ಇವೆರಡು ನನ್ನ ಮಗನಿಗೆ ಜೋಗುಳವಾಗಿದ್ದವು, ಈಗ ಅವನೇ ಅವನ್ನು ನನಗೆ ಹೇಳುತ್ತಾನೆ :)
ಧನ್ಯವಾದಗಳು ವಿದ್ಯಾ :)
ನಾ ಮೊದಲ ದಿನದಿಂದಲೂ "ಅತ್ತಿತ್ತ ನೋಡದಿರು", "ಜೋ ಅಚ್ಯುತಾನಂದ", "ಆಡಿ ಬಾ ನನ ಕಂದ" ಹಾಡುಗಳನ್ನೇ ಹಾಡುತ್ತಿರುವೆ :)
ನಿಮ್ಮ ಪರಿಚಯದಿಂದ ಸಂತಸವಾಯ್ತು :)
-ಸವಿತ
ಪುಟ್ಟಿ ಬ್ಲಾಗಿನಲ್ಲಿ ಒಂದಷ್ಟು ಲಾಲಿ ಹಾಡು ಹಾಕಿದ್ದೀನಿ ನೋಡಿ.
Post a Comment