Saturday, May 7, 2011

ಬೀಟ್ರೂಟ್ ಲಡ್ಡು!!! Beetroot Laddu!!!

ಕೆಂಪಗಿದೆಯೆಂದೋ, ಸಿಹಿಯಾದಿದೆಯೆಂದೋ, ತಿನ್ನಲು ಇಷ್ಟವಿಲ್ಲವೆಂದೋ.....ಹತ್ತಾರು ನೆಪವೊಡ್ಡಿ ನಾವು ದಿನೇ ತಿನ್ನುವ ತರಕಾರಿಗಳಲ್ಲಿ ಅತಿಯಾಗಿ ಕಡೆಗಣಿಸುತ್ತಿರುವುದೆಂದ್ರೆ ಬೀಟ್ರೂಟು. Beta vulgaris ಎಂಬ ಸಸ್ಯ ಶಾಸ್ತ್ರದ ಹೆಸರಿನಿಂದ ಕರೆಯಲ್ಪಡುವ ಈ ಬೀಟ್ರೂಟಿನ ಇತಿಹಾಸ ಎರಡನೇ ಶತಮಾನದಷ್ಟು ಹಳೆಯದಂತೆ. ಔಷಧೀಯ ಗುಣಗಳುಳ್ಳ ಈ ಬೀಟ್ರೂಟನ್ನ ಗ್ರೀಕ್ ಆರೋಗ್ಯ ದೇವತೆಯಾದ ಅಪೋಲೋವಿಗೆ ಅರ್ಪಿಸಿ ಅದರಷ್ಟೇ ತೂಕದ ಬೆಳ್ಳಿಯನ್ನ ಪಡೆಯುತ್ತಿದ್ದರಂತೆ!! ಅಷ್ಟು ಬೆಲೆಯುಳ್ಳದ್ದಾಗಿತ್ತು!!

ಪಾಲಕ್ ಸೊಪ್ಪಿನಂತೆಯೇ ಇರುವ ಬೀಟ್ರೂಟಿನ ಎಲೆಗಳನ್ನ ಮೊದಲಿಂದಲೂ ಆಹಾರವಾಗಿ ಬಳಸುತ್ತಿದ್ದರಂತೆ. ಆದರೆ ಬೀಟ್ರೂಟಿನ ಗಡ್ಡೆಯನ್ನ ಊಟಕ್ಕೆ ಬಳಸಬಹುದೆಂದು ಕಂಡುಕೊಂಡವರಲ್ಲಿ ಫ್ರೆಂಚರು ಮೊದಲಿಗರು. ಅಧಿಕ ರಕ್ತದೊತ್ತಡ, ಹೃದಯ, ಯಕೃತ್, ಅಜೀರ್ಣಕ್ಕೆ ಸಂಭಂದಿಸಿದ ಖಾಯಲೆಗಳಿಗೆ ಈ ಬೀಟ್ರೂಟ್ ಒಂಥರಾ ನೈಸರ್ಗಿಕ ಔಷಧಿಯೇ ಸರಿ. ಇದರ ಗಾಡವಾದ ಕೆಂಪು ಬಣ್ಣದಿಂದಾಗಿ ಬೀಟ್ರೂಟು ಪುಡಿಯನ್ನ ಫುಡ್ ಕಲರಿಂಗಾಗಿ ಜಾಮ್, ಜೆಲ್ಲಿ, ಜ್ಯೂಸು, ಐಸ್ಕ್ರೀಮ್,ಕೇಕುಗಳಲ್ಲಿ ಬಳಸುತ್ತಾರಂತೆ.

ಇನ್ಮೇಲಾದ್ರೂ ಒಂದೊಂದು ತರಕಾರಿಯ ಬಗ್ಗೆ ತಿಳಿದುಕೊಂಡು ಅಟ್ಲೀಸ್ಟ್ ಮೂರು ಆಹಾರ ಪದಾರ್ಥಗಳನ್ನ ಮಾಡಿ ಸವಿ ನೋಡುವ ಹೊಸ ಪ್ರಾಜೆಕ್ಟನ್ನ ನಾನು ಮತ್ತು ನನ್ನಮ್ಮ ಶುರು ಮಾಡಿದ್ದೇವೆ. ಹಸಿಯಾಗಿ, ತುರಿದು, ಬೇಯಿಸಿ, ಅರೆದು ಹೇಗೆಲ್ಲಾ ಸೇವಿಸಬಹುದಾದ ಈ ಬೀಟ್ರೂಟಿನಿಂದ ನಾವು ತಯಾರಿಸಿದ್ದು ಬೀಟ್ರೂಟ್ ಲಡ್ಡು, ಸೂಪ್ ಮತ್ತು ಚಟ್ನಿ.

ಬೀಟ್ರೂಟ್ ಲಡ್ಡು!!ಬೇಕಾಗುವ ಪದಾರ್ಥಗಳು:

ತುರಿದ ಬೀಟ್ರೂಟ್ - 3 ಬಟ್ಟಲು
ತುರಿದ ಒಣ ಕೊಬ್ಬರಿ - 1 ಬಟ್ಟಲು
ಸಕ್ಕರೆ -1 ಬಟ್ಟಲು
ತುಪ್ಪ - 2 ಚಮಚ
ಏಲಕ್ಕಿ ಪುಡಿ -1/4 ಚಮಚ
ನಿಮಗೆ ಬೇಕಾದರೆ- ಬಾದಾಮಿ, ದ್ರಾಕ್ಷಿ, ಗೋಡಂಬಿ - ನಿಮ್ಮಿಷ್ಟದಷ್ಟು :) ಮಾಡುವ ವಿಧಾನ:
1. ದಪ್ಪ ತಳದ ಬಾಣಲೆ/ಪಾತ್ರೆಗೆ 2 ಚಮಚ ತುಪ್ಪ ಹಾಕಿ, ಕಾದ ನಂತರ ತುರಿದ ಬೀಟ್ರೂಟನ್ನ ಹಾಕಿ ಹಸಿತನ ಹೋಗುವವರೆಗೂ ಒಂದೈದು ನಿಮಿಷ ಸಣ್ಣನೆಯ ಉರಿಯಲ್ಲಿ ಬಾಡಿಸಿ.
2. ಅದಕ್ಕೆ ಸಕ್ಕರೆ, ಏಲಕ್ಕಿ ಪುಡಿ,ತುರಿದ ಕೊಬ್ಬರಿಯನ್ನ ಹಾಕಿ.ಸಕ್ಕರೆ ಕರಗಿ ಮಿಶ್ರಣವು ಗಟ್ಟಿಯಾಗುವವರೆಗೂ ಚಮಚದಲ್ಲಿ ಕದಡುತ್ತಿರಿ, ತಳ ಹತ್ತಲು ಬಿಡಬೇಡಿ.
3. ಮಿಶ್ರಣವು ಉಂಡೆ ಕಟ್ಟುವ ಹದಕ್ಕೆ ಬಂದ ನಂತರ ಅದನ್ನ ಬೇರೊಂದು ತಟ್ಟೆಗೆ ಸುರಿದು, ತಣ್ಣಗಾಗುವ ಮೊದಲೇ ಚಮಚದಲ್ಲಿ ಸ್ವಲ್ಪ ತೆಗೆದುಕೊಂಡು ತುಪ್ಪ ಸವರಿಕೊಂಡ ಕೈಗಳದಿಂದ ಉಂಡೆ ಕಟ್ಟಿ. ಅದರ ಮೇಲೊಂದು ಗೋಡಂಬಿ, ಬಾದಾಮಿಯನ್ನ ಇಡಿ ಮತ್ತು ಮೇಲೆ ತುರಿದ ಕೊಬ್ಬರಿಯಿಂದ ಅಲಂಕರಿಸಿದರೆ ಬೀಟ್ರೂಟ್ ಲಡ್ಡು ಸವಿಯಲು ರೆಡಿ. :)

4. ನಿಮಗೆ ಉಂಡೆ ಬೇಡವೆಂದರೆ ತುಪ್ಪ ಸವರಿದ ತಟ್ಟೆಯ ಮೇಲೆ ಮಿಶ್ರಣವನ್ನ ಸಮತಟ್ಟಾಗಿ ಸುರಿದು ಚೌಕಾಕಾರ ಇಲ್ಲವೇ ನಿಮಗಿಷ್ಟವಾದ ಆಕಾರದಲ್ಲಿ ಕಟ್ ಮಾಡಿ, ಮೇಲೆ ಒಣ ದ್ರಾಕ್ಷಿ, ಗೋಡಂಬಿ,ಬಾದಾಮಿ, ತುರಿದ ಕೊಬ್ಬರಿಯನ್ನ ಹರಡಿ. ಇದು ತಣ್ಣಗಾದ ಮೇಲೆ ಮಿಠಾಯಿಯ ರೀತಿಯಲ್ಲಿ ಕೂಡಾ ತಿನ್ನಬಹುದು.

ಬಳಕೆ: 7-8 ದಿನಗಳು
ನೀವೂ ಕೂಡ ಇದನ್ನ ಮಾಡಿ ಸವಿದು ನೋಡಿ :)

ಚಿತ್ರಕೃಪೆ: ಸ್ವಂತದ್ದು
*********************************************************************************************
For all my friends who doesn't read kannada :)


Due to its color or sweetness, or some other reasons...In our daily life the most underrated & undertasted vegetable is found to be Beetroot!! 

Having a botanical name Beta vulgaris, its history traces back to 2nd century. Due to its medicinal values, Beetroot was offered in Apollo’s temple & it was reckoned to be worth its own weight in silver!

Since beginning people were only using beet leaves, later its popularity was declined due to the introduction of Spinach. Beetroot was used only for medicine but in 1800's it became a popular food as French chefs recognized it's potential!!

Beetroot is a natural medicine for cardiovascular problems, Liver, blood pressure & indigestion etc.

Due to its Deep Dark Crimson color…. beetroot powder is used as a industrial Red Food Colorant in tomato sauces, jams, jellies, ice creams, cakes!!!

Me & my mom have started this project of exploring each vegetable by learning all the interesting facts, cooking at least 3 dishes using it & of course tasting it as well :)

This week we have triedout Beetroot Laddu, Beetroot Soup & Beetroot Chutney!!!
Here is the recipe for you!!

Beetroot Laddu
Ingredients:
Grated Beetroot - 3 bowls
Grated dry coconut - 1 bowl
Sugar - 1 bowl (you can use more according to your taste!)
Ghee - 2 Spoons
Cardamom powder – 1/4th spoon
Dry fruits of your choice (Almond, cashew nut, raisins)

Method:
1. Take a thick bottom pan, add 2 spoons of Ghee add grated beetroot & fry for 5 mins till the raw smell & taste goes off.
2. Add Sugar, grated coconut, cardamom powder. Keep stirring for next 10-15 mins continuously till the mixture becomes sticky thick consistent.
3. Transfer the mixture on a ghee coated plate. Once it is cooled a bit, takeout 2 spoons of mixture on your palm make a small laddus by rolling it between your both palms. You can decorate with dry fruits of your choice & Sprinkle grated coconut on the laddus.
4. If you don't like it like laddu, pour the mixture on ghee coated plate & cut it like small square or shape of your imagination, decorate with dry fruits!

Best to consume before 7-8 days

Its rally tasty & kids will love it!! :) Try it out & share your experience :) 
watch out my next article for Beetroot soup & chutney! :)

5 comments:

Nataraju E said...

Nice one Savitha :-) Lemmi come your home soon :-)

ರವೀಶ್ ಭಟ್ಟ್ said...

Nice One...:) inmele E Tara Beetroot Tinnike Try madtini.. Thank You..

ಸಾಗರದಾಚೆಯ ಇಂಚರ said...

superb, waiting for next episode :)

ಪುಟ್ಟಿಯ ಅಮ್ಮ/Putti Amma said...

ಬೀಟ್ ರೂಟ್ ಲಡ್ಡು ! ಆಹ್ ಹೊಸ ರುಚಿ :)

Foods said...

sakhath agi ide :)