Friday, June 27, 2014

ಒಂದಾನೊಂದು ಕಾಲದಾಗ ಏಸೊಂದ ಮುದವಿತ್ತ...

ಶಂಕರ್ ನಾಗ್ ನೆನಪಿನೊಂದಿಗೆ... ಬಹಳ ಕಾಡುವ ಹಾಡು...



ಒಂದಾನೊಂದು ಕಾಲದಾಗ ಏಸೊಂದ ಮುದವಿತ್ತ...
ಏಸೊಂದ ಮುದವಿತ್ತ ಮುದಕೊಂದ ಹದವಿತ್ತ
ಅದಕ ಹಂಗಾಮಿತ್ತ ಅದಕೊಂದು ಶಿವನ ಅಂಕುಶವಿತ್ತ
ಒಂದಾನೊಂದು ಕಾಲದಾಗ....

ಆಳದ ಹಳಗವಿ ಬೆಳಕನುಟ್ಟಾವೊ
ಹಾಳ ಬಾವಿಗು ಕಣ್ಣು ಬಂದಾವೊ
ಬೇಲಿಯ ಮೇಗೆ ನೀಲಿಯೆ ಹೂವು
ಬೀಳು ನೆಲದ ಏಗಿ ಕಲ್ಲ ಕರಗಿ ತೇಲಿ ಚಿಲ್ಲನೆ ಚಿಮ್ಮಿತ್ತ....

ಒಂದಾನೊಂದು ಕಾಲದಾಗ ಏಸೊಂದ ಮುದವಿತ್ತಾ.....

ಸೀಮಿಯ ಕಲ್ಲಿಗೆ ಬೇಲಿಯ ಸಾಕ್ಷಿ
ಬೇಲಿ ಹೂವಿನಾಗ ಹನಿ ಹನಿ ಇಬ್ಬನಿ
ನಗತ ತಟಕತಾವ ಇಬ್ಬನಿ ಹನಿಗೆ
ಸಂಜೆ ಮುಂಜಾನೆ ಮಂಜು ಮೂಡಿದಾರ ಮಂಜು ಕೆಂಪಾಗಿತ್ತಾ....

ಒಂದಾನೊಂದು ಕಾಲದಾಗ ಏಸೊಂದ ಮುದವಿತ್ತಾ....

ಕುರುಹುಗೆಟ್ಟದಕ ಹೆಸರೇನ ಇಟ್ಟಿ
ಎಲ್ಲಿ ನೋಡಿದಲ್ಲಿ ವೀರದಲ್ಲ ಓಳಿ
ಹಸನು ಮಾಡಿ ಹರಡಿದ್ದ ಹೊಲದಾಗ
ಬೊಗಸೇಲಿ ಬಿತ್ತಿ ತನಿಕೇಲೆ ಎಲಗಾರ ಎಲುಬಿನ ಹೊಲ ರಾಶಿ...

ಒಂದಾನೊಂದು ಕಾಲದಾಗ ಏಸೊಂದ ಮುದವಿತ್ತ.....
ಒಂದಾನೊಂದು ಕಾಲದಾಗ ಏಸೊಂದ ಮುದವಿತ್ತ ... ಏಸೊಂದ ಮುದವಿತ್ತ....