Thursday, October 2, 2014

ಹಸಿರು ಟೊಮ್ಯಾಟೋ ಚಟ್ನಿ....Green Tomato Chutney

ಬೇಕಾಗುವ ಪದಾರ್ಥಗಳು:
8-9 ಹಸಿರು ಟೊಮ್ಯಾಟೋ ಕಾಯಿಗಳು
5-6 ಹಸಿ ಮೆಣಸಿನಕಾಯಿಗಳು
7 ಎಸಳು ಬೆಳ್ಳುಳ್ಳಿ
ಒಂದು ಹಿಡಿ ಉರಿಗಡಲೆ 
ಒಂದು ಹಿಡಿ ತುರಿದ ತೆಂಗಿನ ಕಾಯಿ 
ಸ್ವಲ್ಪ ಕೊತ್ತಂಬರಿ ಸೊಪ್ಪು 
ಉಪ್ಪು - ರುಚಿಗೆ ತಕ್ಕಷ್ಟು
ನೀರು - ಬೇಕಾದರಷ್ಟು
ಒಗ್ಗರಣೆಗೆ : 3 ಚಮಚ ಎಣ್ಣೆ, ಸಾಸಿವೆ, ಇಂಗು , ಕರಿಬೇವಿನ ಎಸಳುಗಳು, ಒಂದು ಹಿಡಿ ಸಣ್ಣಗೆ ಹೆಚ್ಚಿದ ಈರುಳ್ಳಿ 

ಮಾಡುವ ವಿಧಾನ:
1. ಹಸಿರು ಟೊಮ್ಯಾಟೋ ಕಾಯಿಗಳನ್ನ ಮತ್ತು ಹಸಿ ಮೆಣಸಿನ ಕಾಯಿಗಳನ್ನ ಪಾತ್ರೆಯಲ್ಲಿ ಹಾಕಿ ನೀರು ಹಾಕಿ ಬೇಯಿಸಿಕೊಳ್ಳಿ. ಕುಕ್ಕರ್ರಿನಲ್ಲಿ ಹಾಕಿದರೆ ಒಂದು ವಿಷಲ್ ಸಾಕು. 
2. ನಂತರ ಎರಡನೇ ಚಿತ್ರದಲ್ಲಿರುವಂತೆ ತುರಿದ ಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಉಪ್ಪು, ಉರಿಗಡಲೆ ಹಾಕಿ ಒಳಕಲ್ಲಿನಲ್ಲಿ ಅಥವಾ ಮಿಕ್ಸರಿನಲ್ಲಿ ಚಟ್ನಿಯ ಹದಕ್ಕೆ ರುಬ್ಬಿಕೊಳ್ಳಿ. ಕೊನೆಗೆ ಬೇಯಿಸಿದ ಟೊಮ್ಯಾಟೋ, ಮೆಣಸಿನಕಾಯಿಯನ್ನ ಸೇರಿಸಿ ಒಂದೆರಡು ಸುತ್ತು ರುಬ್ಬಿರಿ. 
3. ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿಕಾದ ನಂತರ ಸಾಸಿವೆಇಂಗುಕರಿಬೇವಿನ ಎಸಳುಗಳನ್ನ ಹಾಕಿ ನಂತರ ರುಬ್ಬಿಕೊಂಡ ಮಿಶ್ರಣವನ್ನ ಸುರಿದು ಒಂದೆರಡು ನಿಮಿಷ ಕುದಿಸಿದರೆ ಟೊಮ್ಯಾಟೋ ಚಟ್ನಿ ರೆಡಿ. 

ಈ ಟೊಮ್ಯಾಟೋ ಚಟ್ನಿ ಚಪಾತಿ, ದೋಸೆ,ರೊಟ್ಟಿ ಮತ್ತು ಅನ್ನದೊಟ್ಟಿಗೆ ರುಚಿಯಾಗಿರತ್ತೆ. ನೀವೂ ಕೂಡ ಇದನ್ನ ಮಾಡಿ ಸವಿದು ನೋಡಿ :) 
ಚಿತ್ರಕೃಪೆ: ಸ್ವಂತದ್ದು
ಬಳಕೆ: ಫ್ರಿಜ್ಜಿನಲ್ಲಿಟ್ಟರೆ ಒಂದೆರಡು ದಿನ



Ingredients:
8-9 Raw Green Tomatos
5-6 Green Chillies
7 Garlic Cloves 
Roasted channa dal - one bowl
Grated Coconut - one bowl
coriander Leaves 
Salt - for taste
Oil - 3 Spoons
Mustard & Asafoetida - pinch
chopped onion - one bowl

Method:
1. Boil green tomatos & green chillies in a vessel or if you are using cooker one whistle will do.
2. Like shown in the second picture grind the ingredients Garlic cloves, roasted channa dal, grated coconut,coriander leaves, salt. once the chutney is done add the boiled tomatos & green chillies grind it for one or two rounds.
3. Heat 2 spoons of oil in a pan, add mustard seeds, upon crackling add a pinch of asafoetida, few curry leaves, chopped onions, once onions turn to golden brown, add the ground mixture. Boil it for 2 minutes in medium flame. It is ready to be served with Rice, Roti & Dosa. :)

Best to Use: on the same day

In Refrigerator:1-2 days
Picture Courtesy: Own

No comments: