Monday, June 20, 2016

Quinoa Upma Indian Breakfast / ನವಣೆ ಉಪ್ಪಿಟ್ಟು

Quinoa is a nutritious whole grain substitute for rice & its very simple to prepare, very low carbs but full of protein. We tried making vegetable Quinoa Upma for sunday breakfast.
 Steps Followed:
1. Take a cup of Quinoa, wash & strain it
2. Boil 2 cups of water in a vessel & add the quinoa & little salt.
3. Close the lid & put it in a simmer so that it cooks slowly for about 15-20 mins.
4. Once all the water is over, quinoa becomes like a translucent pearls
5. Allow it to cool down
6. Take a frying pan, add 2 spoons of oil, add mustard, groundnuts, curry leaves, green chillies, onions. Once onions turns golden brown, add chopped cauliflowers, saute it for 2 mins & add boiled carrots & potatos.
7. Add garam masala, add the cooked quinoa at the end & salt to taste.


ನವಣೆ ಉಪ್ಪಿಟ್ಟು 
ನವಣೆ ಕಿರು ಮತ್ತು ಸಿರಿಧಾನ್ಯಗಳಲ್ಲಿ ಪ್ರಮುಖವಾದದ್ದು, ಕಾರ್ಬೋಹೈಡ್ರೇಟ್ ಕಡಿಮೆಯಿರುವ, ಪ್ರೋಟೀನ್ ಹೆಚ್ಚಿರುವ ಧಾನ್ಯ. ನಾವು ಮಾಡಿದ್ದು ನವಣೆ ಉಪ್ಪಿಟ್ಟು.
ಮಾಡುವ ವಿಧಾನ:
೧. ಒಂದು ಲೋಟ ನವಣೆಯನ್ನ ನೀರಿನಲ್ಲಿ ತೊಳೆದುಕೊಳ್ಳಿ.
೨. ಮತ್ತೊಂದು ಪಾತ್ರೆಯಲ್ಲಿ ಎರಡು ಲೋಟ ನೀರು ಹಾಕಿ ಸ್ಟವ್ ಮೇಲಿಡಿ, ಮೊದಲ ಕುದಿ  ಬಂದಾಗ ತೊಳೆದಿಟ್ಟ ನವಣೆಯನ್ನ ಮತ್ತು ಸ್ವಲ್ಪ ಉಪ್ಪು ಹಾಕಿ, ಪಾತ್ರೆಗೆ ತಟ್ಟೆಯನ್ನ ಮುಚ್ಚಿಡಿ, ಉರಿ ಸಣ್ಣಗಿರಲಿ.
೩. ನವಣೆಯನ್ನ ೧೫-೨೦ ನಿಮಿಷದವರೆಗೆ ನಿಧಾನವಾಗಿ ನೀರು ಬತ್ತಿ ಹೋಗುವವರೆಗೂ ಬೇಯಿಸಿಕೊಂಡು ನಂತರ ತಟ್ಟೆಯ ಮೇಲೆ ಹರಡಿ.
೪. ಉಪ್ಪಿಟ್ಟನ್ನ ತಯಾರಿಸುವ ರೀತಿಯಲ್ಲೇ ಒಗ್ಗರಣೆ ಹಾಕಿ. ಬಾಣಲೆಯಲ್ಲಿ ೨ ಚಮಚ ಎಣ್ಣೆಯನ್ನ ಹಾಕಿ, ಕಾದ ನಂತರ ಸಾಸಿವೆ, ಕರಿ ಬೇವು, ಸೇಂಗಾಬೀಜ, ಮೆಣಸಿನಕಾಯಿ ಮತ್ತು ಹೆಚ್ಚಿದ ಈರುಳ್ಳಿ,ಸಣ್ಣಗೆ ಹೆಚ್ಚಿದ ಕೋಸನ್ನ ಒಂದಾದ ನಂತರ ಒಂದನ್ನ ಹಾಕಿ, ನಂತರ ಬೇಯಿಸಿದ ಕ್ಯಾರಟ್ ಮತ್ತು ಆಲೂಗಡ್ಡೆ ಹಾಕಿ.
೫. ಕೊನಗೆ ಸ್ವಲ್ಪ ಗರಂ ಮಸಾಲ ಪುಡಿ, ನವಣೆ
ನ್ನ ಹಾಕಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನ ಹಾಕಿ ಬಿಸಿ ಮಾಡಿ, ಕೊನೆಗೆ ಹೆಚ್ಚಿದ ಕೊತ್ತಂಬರಿ ಸೊಪ್ಪಿಂದ ಅಲಂಕರಿಸಿ ಆಸ್ವಾದಿಸಿ.